Ian Fleming- James Bond- Introduction in Kannada

English books, General, Movies and Music
“ಮೈ ನೇಮ್ ಈಸ್…ಜೇಮ್ಸ್ ಬಾಂಡ್” – ಸೃಷ್ಟಿಸಿದ ಇಯಾನ್ ಫ಼್ಲೆಮಿಂಗ್ Posted on April 26, 2017 ಆಂಗ್ಲ ಕಾದಂಬರಿಕಾರರ ಪರಿಚಯ ಮಾಲಿಕೆ -೬ “ಮೈ ನೇಮ್ ಈಸ್…ಜೇಮ್ಸ್ ಬಾಂಡ್” – ಸೃಷ್ಟಿಸಿದ ಇಯಾನ್ ಫ಼್ಲೆಮಿಂಗ್ ~~~~~~~~~~~~~~~~~~~~~~~~~~~~~~~~~~~~~~~~~~~~ Amazon Link to Buy: ಗೂಢಚಾರ/ರಹಸ್ಯ ಏಜೆಂಟ್ ಎಂದರೆ ಜೇಮ್ಸ್ ಬಾಂಡ್ ಎಂದು ಪ್ರಪಂಚದ ಮೂಲೆಮೂಲೆಯಲ್ಲೂ ಚಿಕ್ಕ ಮಕ್ಕಳಿಗೂ ಇಂದು ಪರಿಚಿತ. ಇಂತಾ ಒಬ್ಬ ಲೋಕವೇ ಮರೆಯದ ನಾಯಕ ಪಾತ್ರವನ್ನು ಸೃಷ್ಟಿಸಿದ್ದು ಬ್ರಿಟಿಷ್ ನೇವಲ್ ಇಂಟೆಲಿಜೆನ್ಸ್ ವಿಭಾಗದಲ್ಲಿ ಖುದ್ದು ಅಧಿಕಾರಿಯಾಗಿ ಸೇವೆ ಸಲ್ಲಿಸಿ ನೈಜ ಅನುಭವ ಪಡೆದ ಪ್ರಸಿದ್ಧ ಲೇಖಕ ಇಯಾನ್( ಅಯಾನ್) ಫ಼್ಲೆಮಿಂಗ್(1908 – 1964). ಎರಡನೇ ಮಹಾಯುದ್ಧದಲ್ಲಿ ತನ್ನ ಸ್ವಂತ ಅನುಭವ ಮತ್ತು ನಂತರ ಪತ್ರಕರ್ತನಾಗಿ ದುಡಿದು ಭಟ್ಟಿ ಇಳಿಸಿದ ಅನುಭವಸಾರವೇ ಜಗ ಮೆಚ್ಚಿದ ಏಜೆಂಟ್ ಜೇಮ್ಸ್ ಬಾಂಡ್ ಸರಣಿಯ ಕಾದಂಬರಿಗಳು. ತಮ್ಮ ೫೬ ವಯಸ್ಸಿನಲ್ಲೇ ನಿಧನರಾದರು ಇಯಾನ್. ಅವರ ಮರಣದ ನಂತರವೂ ಇಂದಿಗೂ ಆ ಪಾತ್ರದ ಸರಣಿ ಚಲನಚಿತ್ರಗಳು ಬಿಡುಗಡೆಯಾಗುತ್ತಲೇ ಇರುವುದರಿಂದ ಹಲವರಿಗೆ ಅವರು ಖುದ್ದಾಗಿ ಬರೆದ ಕತೆಗಳೆಷ್ಟು, ನಂತರ ಚಿತ್ರ ನಿರ್ಮಾಪಕರು ಸೃಷ್ಟಿಸಿದ ಚಿತ್ರಕತೆಗಳ್ಯಾವುವು ಎಂಬುದರ ಮಾಹಿತಿ ಇಲ್ಲ.. ಅವರು ಬರೆದದ್ದು ೧೪ ಕಾದಂಬರಿಗಳು ಒಂದಾದ ಮೇಲೊಂದು.. ತದ ನಂತರ ಬಂದ ಮುಂದುವರೆದ ಸರಣಿ ಕತೆ/ ಚಿತ್ರಕತೆಗಳು ಸೇರಿ ಮೊತ್ತ ೨೪!…
Read More
ರಾಬರ್ಟ್ ಲ್ಯುಡ್ಲಮ್ ಎಂಬ ಸರಣಿ ಕತೆ ಮಾಂತ್ರಿಕ- Robert Ludlum in Kannada

ರಾಬರ್ಟ್ ಲ್ಯುಡ್ಲಮ್ ಎಂಬ ಸರಣಿ ಕತೆ ಮಾಂತ್ರಿಕ- Robert Ludlum in Kannada

Blog, English books, General, Kannada books
ಆಂಗ್ಲ ಕತೆಗಾರ ಪರಿಚಯ ಮಾಲಿಕೆ-೫ ~~~~~~~~~~~~~~~~~~~~~~~~~~~~ ರಾಬರ್ಟ್ ಲ್ಯುಡ್ಲಮ್ ಎಂಬ ಸರಣಿ ಕತೆ ಮಾಂತ್ರಿಕ ~~~~~~~~~~~~~~~~~~~~~~~~~~~~~ ರಾಬರ್ಟ್ ಲ್ಯುಡ್ಲಮ್(೧೯೨೭-೨೦೦೧) ಪುಸ್ತಕದಂಗಡಿ ಮತ್ತು ಚಲನಚಿತ್ರರಂಗ ಎರಡರಲ್ಲೂ ಜಾದೂ ಸೃಷ್ಟಿಸಿ ಮಾಯವಾದ ಅಪ್ರತಿಮ ಗೂಡಚರ್ಯೆ ಮತ್ತು ರಹಸ್ಯ ಕಾದಂಬರಿಕಾರ. ಇಂಗ್ಲೀಷ್ ಚಲನಚಿತ್ರ ವೀಕ್ಷಕರಿಗೆ ಚಿರಪರಿಚಿತವಾದ ಬೌರ್ನ್ ( Bourne) ಎಂಬ ಅಮ್ನೀಸಿಯಾ ( ಸ್ಮೃತಿನಾಶ, ವಿಸ್ಮೃತಿ) ದಿಂದ ನರಳುತ್ತಿರುವ ಸಿ ಐ ಎ ಹತ್ಯೆಗಾರನ ಸುತ್ತ ಹೆಣೆದ ಸಾಹಸಮಯ ಸಸ್ಪೆನ್ಸ್ ಯುಕ್ತ ಸರಣಿ ವೃತ್ತಾಂತ ನಾಲ್ಕು ಪುಸ್ತಕಗಳಾಗಿ ಪ್ರಕಟವಾಗಿ ಅತ್ಯಧಿಕ ಮಾರಾಟದ ದಾಖಲೆಗಳನ್ನು ಮುರಿದು ೧೯೮೦-೯೦ರಲ್ಲಿ ಗೂಡಚರ್ಯೆ ಕಾದಂಬರಿಗಳ ಹೊಸಯುಗ ಸೃಷ್ಟಿಮಾಡಿತು. ಒಟ್ಟಾರೆ ಲುಡ್ಲಮ್ ೨೭ ಕಾದಂಬರಿಗಳನ್ನು ರಚಿಸಿದರೆ, ಅವು ಸುಮಾರು ೫೦ ಕೊಟಿ ಪ್ರತಿಗಳಿಗೂ ಹೆಚ್ಚಿಗೆ ಮಾರಾಟವಾಗಿದೆ ಎಂಬ ದಾಖಲೆಯಿದೆ. ೩೩ ಭಾಷೆಗಳಲ್ಲಿ, ೪೦ ದೇಶಗಳಲ್ಲಿ ಇವರ ಕಾದಂಬರಿಗಳು ಪ್ರಕಾಶ ಕಂಡಿವೆ. ಮೊದಲು ಅಮೆರಿಕನ್ ಮೆರೀನ್ ಸೈನ್ಯದಲ್ಲಿದ್ದು ಹೊರಬಂದು ನಂತರ ಅಲ್ಲಿನ ನಾಟಕ ರಂಗದಲ್ಲಿ ಜನಪ್ರಿಯರಾಗಿ ಹಲವು ವರ್ಷ ಸೇವೆ ಸಲ್ಲಿಸಿದರು. ಐದಾರು ಸೂಪರ್ ಹಿಟ್ ಚಲನಚಿತ್ರಗಳು, ಮಿನಿ ಧಾರಾವಾಹಿ ಟಿ ವಿ ಸರಣಿಗಳು ಇವರ ಕೀರ್ತಿ ಮತ್ತು ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದರಲ್ಲಿ ಅತಿ ಹೆಚ್ಚು ಜನಜನಿತವಾದ "ಜೇಸನ್ ಬೌರ್ನ್" ಎಂಬ ನಾಯಕ ಮೊದಲ ಕಂತಿನಲ್ಲೇ ತನ್ನ ಬಗ್ಗೆ ಎಲ್ಲಾ ಮರೆತು ಎಲ್ಲೋ ಗಾಯಗೊಂಡು ಎದ್ದೇಳುತ್ತಾನೆ..ತಾನ್ಯಾರೆಂಬ…
Read More

Perry Mason can solve any case!

English books, Kannada books
ಆಂಗ್ಲ ಕಾದಂಬರಿಕಾರರ ಪರಿಚಯ ಮಾಲಿಕೆ -೩: ```````````````````````````````````````````````` (ಇದು ಸಹಾ ಜನಪ್ರಿಯ ಆಂಗ್ಲ ಕಾದಂಬರಿಗಳ ಬಗ್ಗೆ ಆ ವರ್ಗದ ಓದುಗರಿಗಾಗಿ :)) ಪೆರ್ರಿ ಮೇಸನ್ ಎಂಬ ಸೋಲಿಲ್ಲದ ವಕೀಲ: ~~~~~~~~~~~~~~~~~~~~~~~~~~ ಇಂಗ್ಲೀಷಿನಲ್ಲಿ ಲೇಖಕ ಅರ್ಲ್ ಸ್ಟ್ಯಾನ್ಲಿ ಗಾರ್ಡನರ್ (೧೮೮೯-೧೯೭೦) ಅವರ ಹೆಸರಿಗಿಂತಾ ಅವರು ಸೃಷ್ಟಿಸಿದ ಅದ್ವಿತೀಯ ಯಶಸ್ಸು ಪಡೆವ ಕ್ರಿಮಿನಲ್ ವಕೀಲ "ಪೆರ್ರಿ ಮೇಸನ್" ಪಾತ್ರವೇ ಹೆಚ್ಚು ಜನಜನಿತ. ಸಾಮಾನ್ಯವಾಗಿ ವಕೀಲ ವೃತ್ತಿಯ ಬೈಬಲ್ ಎನಿಸಿಕೊಳ್ಳುವಂತಾ ಈ ಸರಣಿಯಲ್ಲಿ ಎಲ್ಲಾ ಬಗೆಯ ಕೊಲೆ/ ವಂಚನೆಗೆ ಸಂಬಂಧಪಟ್ಟ ಕಾನೂನಿ ಸಮಸ್ಯೆಗಳನ್ನು ಗಾರ್ಡನರ್ ಅತಿ ಯಶಸ್ವಿಯಾಗಿ ಸವಿವರವಾಗಿ ಬಿಂಬಿಸುತ್ತಿದ್ದರು. ತಮ್ಮ ಪ್ರತಿ ಕೇಸಿನ ಕಾದಂಬರಿಯಲ್ಲಿ ತಮ್ಮ ಕೇಸಿನ ತಿರುಳನ್ನು ರೋಮಾಂಚಕ ರೀತಿಯಲ್ಲಿ ಕೊನೆ ಪುಟದವರೆಗೂ ವಾದ-ಪ್ರತಿವಾದ ಮತ್ತು ಶೋಧನೆ ಮೂಲಕ ಉಗುರು ಕಚ್ಚುವಷ್ಟು ಕಾತರ, ಆಸಕ್ತಿ ಮೂಡಿಸುತ್ತಾ ಹೊರತರುತ್ತಾರೆ. ಆತನ ಸಹಾಯಕಿ ಡೆಲ್ಲಾ ಸ್ಟ್ರೀಟ್ ಎಂಬ ಸುಂದರ ಕುಶಾಗ್ರಮತಿ ಯುವತಿ ಅವನ ಬೆನ್ನ ಹಿಂದೆ ಸದಾ ಕಾರ್ಯ ಪ್ರವರ್ತಳಾಗಿರುತ್ತಾಳೆ. ಆಕೆಗೂ ವಕೀಲ ಪೆರ್ರಿಗೂ ಹಲವು ಬಾರಿ ಅನುರಾಗವಿತ್ತೆಂದೂ, ಅವರಿಬ್ಬರೂ ಮದುವೆಯಾಗಬಹುದೆಂಬ ಸುಳಿವು ಮಾತ್ರ ಲೇಖಕ ನಮಗೆ ಆಗಾಗ ನೀಡುತ್ತಾರೆ.. ಆದರೆ ಕೊನೆಯವರೆಗೂ ಆಕೆ ಅವನ ಜೀವನದ ಶಾಶ್ವತ ಸಂಗಾತಿ ಮಾತ್ರ. (more…)
Read More

Maclean-Bagley novels….Intro Kannada

Blog, English books, General, Kannada books
ವಾರಕ್ಕೆರಡು ಆಂಗ್ಲ ಕತೆಗಾರರ ಪರಿಚಯ ಲೇಖನಗಳನ್ನು ಬರೆಯೋಣ ಎಂತಿದ್ದೇನೆ..ಈ ವಾರದ ಎರಡನೇ ಲೇಖನ ಇಲ್ಲಿದೆ: ಆಂಗ್ಲ ಕಾದಂಬರಿಕಾರ ಪರಿಚಯಮಾಲಿಕೆ-೨ -------------------------------------------------- ೬೦-೭೦ ದಶಕದ ಇಬ್ಬರು ರೋಮಾಂಚಕ ಸಾಹಸ ಕತೆಗಾರರು: ಆ್ಯಲಿಸ್ಟರ್ ಮ್ಯಾಕ್ಲೀನ್ ಮತ್ತು ಡೆಸ್ಮಂಡ್ ಬ್ಯಾಗ್ಲಿ: ---------------------------------------------- I. ಆ್ಯಲಿಸ್ಟರ್ ಮ್ಯಾಕ್ಲೀನ್ (೧೯೨೨-೧೯೮೭): ಇವರು ಒಬ್ಬ ಸ್ಕಾಟ್ಲೆಂಡಿನಲ್ಲಿ ಜನಿಸಿದ ಇಂಗ್ಲೀಷ್ ಕತೆಗಾರ. ವಿಶ್ವದಲ್ಲಿ ಇಂದಿಗೂ ಮೇಲ್ಪಂಕ್ತಿಯಲ್ಲಿರುವಂತ ಸಾಹಸಮಯ ಕಾದಂಬರಿಗಳ ಕರ್ತೃ. ರಾಯಲ್ ನೇವಿಯಲ್ಲಿ ಸೇವೆ ಸಲ್ಲಿಸಿದ ಶ್ರೀಯುತರು ( ಒಬ್ಬ ಪಾದ್ರಿಯ ಮಗ ), ಆಗ ನೆಡೆಯುತ್ತಿದ್ದ ವಿಶ್ವಸಮರಗಳಲ್ಲಿ ಭಾಗವಹಿಸಿ ಪ್ರತ್ಯಕ್ಷದರ್ಶಿಯಾಗಿದ್ದವರು. ಅದರಿಂದ ಬಿದುಗಡೆಯಾಗಿ ಮತ್ತೆ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಇಂಗ್ಲೀಷ್ ಪದವಿ ಪಡೆದು ಶಾಲಾ ಅದ್ಯಾಪಕನಾಗಿದ್ದರೂ ತಮ್ಮ ನೌಕಾಪಡೆ ವೃತ್ತಿ ಜೀವನದ ನೆನಪು ಮತ್ತು ಅನುಭವವನ್ನು ಭಟ್ಟಿ ಇಳಿಸಿ ಯುದ್ಧ ಸಂಬಂಧಿತ ಕತೆಗಳನ್ನು ಬರೆಯಲು ಆರಂಭಿಸಿದರು. ಒಮ್ಮೊಮ್ಮೆ ಅಯಾನ್ ಸ್ಟುವರ್ಟ್ ಎಂಬ ಕಾವ್ಯನಾಮದಲ್ಲೂ ಬರೆದರು. ಅವರ ಮೊದಲ ಕಾದಂಬರಿ ಸಹಜವಾಗಿಯೆ ಒಂದು ಯುದ್ಧ ನೌಕೆ- "ಎಚ್ ಎಂ ಎಸ್ ಯೂಲಿಸೆಸ್" ಎಂಬುದರ ಸಮರ ಪ್ರಧಾನ ಸಾಹಸ ಕತೆ , ರೋಚಕ ಬರವಣಿಗೆ, ಹಿಂದೆಂದೂ ಕಾಣಸಿಗದ ಸೇನೆ ಮತ್ತು ವಿಶ್ವ ಯುದ್ದ ನೀತಿಯ ವಿವರಣೆಯಿಂದ ಓದುಗರ ಮನಗೆದ್ದು ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಯಿತು. ಇಂದಿಗೂ ಅದೊಂದು ನೇವಿ ಬಗ್ಗೆಯ ನೈಜ ವ್ಯಾಖ್ಯಾನ ಎಂದೇ ಹೇಳುತ್ತಾರೆ.…
Read More

Raymond Chandler Detective books on Flipkart

Blog, English books, General
Raymond Chandler is the king of noir detective stories of American fiction . His books have sold in millions, copied and plagiarised by many others down the line. But he alone remains the original trendsetter. Some of his books like The Big sleep, A Lady in the Lake are legendary The following book collection is available on Flipkart. Summary: The Big Sleep and Other Novels is a collection of three novels that follows Raymond Chandler’s famous detective Philip Marlowe. The three novels that will get your undivided attention are: The Big Sleep, Farewell, My Lovely, and The Long Goodbye Go buy and read. Have a thrilling time with the Master.... Link below: The Big Sleep and Other Novels
Read More

Alistair Maclean Adventure Novels Set on sale

English books, General
Novels To Read and Cherish: For Adventure Mystery Novel lovers, the name Alistair Maclean spells authority and vintage fiction. The books - Guns of Navarone, Force 10 from Navarone etc are legendary. Along with his two later works  the complete set of 4 novels are now available in Kindle edition. These are high adrenaline, action bestsellers which old school mystery readers should not miss. Priced at a convenient amount, one can carry them on their Kindle devices now.
Read More